ಕನ್ನಡ ಚಿತ್ರರಂಗದ ತಾರಾ ಜೋಡಿಯಾದ ರಾಕಿಂಗ್​ ಸ್ಟಾರ್​ ಯಶ್ ಮತ್ತು ರಾಧಿಕಾ ಪಂಡಿತ್​ ದಂಪತಿಯ ಮುದ್ದಿನ ಮಗಳ ನಾಮಕರಣ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭ ಹಾರೈಸಿದರು.

ಕಳೆದ ಅಕ್ಷಯ ತೃತೀಯದಂದು ತಮ್ಮ ಮಗಳು ಬೇಬಿ ವೈಆರ್​ ಫೋಟೋವನ್ನು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದರು. ಅಲ್ಲದೇ ಭಾನುವಾರ ನಾಮಕರಣ ಕಾರ್ಯಕ್ರಮದ ಸುಳಿವನ್ನೂ ನೀಡಿದ್ದರು.

ಯಶ್​- ರಾಧಿಕಾ ಮಗುವಿಗೆ ಯಶಿಕಾ ಎಂದು ಹೆಸರಿಡಬೇಕೆಂದು ಅಭಿಮಾನಿಗಳು ಇಷ್ಟಪಟ್ಟಿದ್ದರು. ಆದರೆ, ಮಗುವಿನ ಹೆಸರನ್ನು ಈ ಜೋಡಿ ಅಂತಿಮಗೊಳಿಸಿರಲಿಲ್ಲ. ಆದರೆ, ಇಂದು ಅದಕ್ಕೆ ಮುಹೂರ್ತ ನಿಗದಿ ಮಾಡಿದ್ದ ಅವರು, ಪಂಚತಾರ ಹೋಟೆಲ್​ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬವರ್ಗದವರ ಸಮ್ಮುಖದಲ್ಲಿ ಮಗುವಿಗೆ ಐರಾ ಯಶ್​ ಎಂದು ನಾಮಕರಣ ಮಾಡಿದ್ದಾರೆ.

LEAVE A REPLY

Please enter your comment!
Please enter your name here