ಹೊರಗಿಂದ ನೋಡಿದರೆ ಇದೊಂದು ಹಣ್ಣು ಅಂದುಕೊಂಡು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ಮನೆಗೆ ತೆಗೆದುಕೊಂಡು ಹೋದರೂ ಅದನ್ನು ಕೊಯ್ದು ಒಳಗಿನ ಬಂಗಾರದಂತಹ ಹಣ್ಣು ಸವಿಯಬೇಕು ಅಂದರೆ ಸಾಕಪ್ಪಾ ಸಾಕು ಅನಿಸುತ್ತದೆ. ಆದರೂ ಸೀಸನ್ ಮುಗಿಯುವುದರೊಳಗೆ ಹಲಸಿನ ಹಣ್ಣು ತಿನ್ನಲೇಬೇಕು. ಅದರಲ್ಲಿನ ಅತ್ಯಂತ ಮಹತ್ವದ ಔಷಧೀಯ ಗುಣಗಳಿಗಾಗಿ!

ಹೌದು, ಮುಳ್ಳುಗಳಿಂದ ಹಸಿರು ಕವಚದೊಳಗೆ ಅಡಗಿರುವ ಚಿನ್ನದ ಬಣ್ಣದ ಹಣ್ಣು ಎಂತಹವರ ಬಾಯಲ್ಲೂ ನಿರೂರಿಸದೇ ಇರದು. ಅದರಲ್ಲೂ ಘಮ ಘಮ ವಾಸನೆ ಆಸೆ ಹೆಚ್ಚಿಸುತ್ತದೆ. ಮಳೆಗಾಲದ ಆರಂಭದಲ್ಲಿ ಮಾರುಕಟ್ಟೆಗೆ ಬರುವ ಹಲಸಿನ ಹಣ್ಣು ಆರೋಗ್ಯದಾಯಕ. ಇದರಲ್ಲಿ ಪೋಷಕಾಂಶಗಳು ಆರೋಗ್ಯ ವೃದ್ಧಿಸುತ್ತದೆ. ಅಂತಹ ಅಂಶಗಳು ಏನೆಲ್ಲಾ ಇವೆ ತಿಳಿದುಕೊಳ್ಳೋಣ ಬನ್ನಿ..

100 ಗ್ರಾಂ ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳು:

ಕಾರ್ಬೋಹೈಡ್ರೇಟ್ – 19 ಗ್ರಾಂ
ಶಕ್ತಿ- 95 ಕೆಕ್ಯಾಲೋರೀಸ್
ನಾರಿನಂಶ – 1.5 ಗ್ರಾಂ
ಕೊಬ್ಬು – 0.64 ಗ್ರಾಂ
ಪ್ರೊಟೀನ್ – 1.72 ಗ್ರಾಂ

ಉಳಿದಂತೆ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಕ್ಯಾಲ್ಸಿಯಂ, ಕಬ್ಬಿಣದಂಶ, ಮೆಗ್ನೀಶಿಯಂ, ರಂಜಕ, ಪೊಟ್ಯಾಶಿಯಂ, ಸತುವಿನಂತಹ ಅಂಶಗಳು ಹೇರಳವಾಗಿವೆ.

 

ರೋಗ ನಿರೋಧಕ ಶಕ್ತಿ ವೃದ್ಧಿ

ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ವೈರಸ್ ಮತ್ತು ಬ್ಯಾಕ್ಟೀರೀಯಾ ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತದೆ. ಅದ್ಭುತವಾದ ರೋಗನಿರೋಧಕ ಶಕ್ತಿ ಹೊಂದಿದೆ.

ಕ್ಯಾನ್ಸರ್, ಮುಪ್ಪು ನಿರೋಧಕ

ಹಲಸಿನ ಹಣ್ಣಿನಲ್ಲಿ ಲಿಗಾನ್ಸ್, ಐಸೋಫ್ಲೇವನ್ಸ್ ಮತ್ತು ಸಫೋನಿನ್ಸ್ ನಂತಹ ಅಂಶಗಳು ಫೈಟೋನ್ಯೂಟ್ರಿಯಂಟ್ಸ್ ನ್ನು ದೇಹಕ್ಕೆ ಪೂರೈಸುವುದರಿಂದ ಈ ಹಣ್ಣು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಮತ್ತು ಬೇಗನೆ ಮುಪ್ಪು ಬರದಂತೆ ತಡೆಯುತ್ತದೆ.

ದೈಹಿಕ ಶಕ್ತಿಗೆ ಆನೆಬಲ

ಹಲಸಿನಲ್ಲಿರುವ ಅತ್ಯಧಿಕ ನಾರಿನಂಶ ಕರುಳಿನ ಚಲನೆಯನ್ನು ಸುಗಮವಾಗಿಡುವುದಲ್ಲದೆ, ಅಲ್ಸರ್ ಮತ್ತು ಜೀರ್ಣಕ್ರೀಯೆ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಬೆನ್ನಿನ ಮೂಳೆಗೆ ಬಲ

ಈ ಹಣ್ಣಿನಲ್ಲಿರುವ ಮೆಗ್ನಿಶಿಯಂ ಮತ್ತು ಕ್ಯಾಲ್ಶಿಯಂ ಬೆನ್ನಿನ ಮೂಳೆಯನ್ನು ಬಲಗೊಳಿಸುವಲ್ಲಿ ಸಹಾಯಕಾರಿಯಾಗಿದೆ.

ಹಲಸಿನ ಹಣ್ಣಿನಲ್ಲಿ ಕಬ್ಬಿಣದ ಅಂಶ ರಕ್ತ ಹೀನತೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.

ವಿಟಮಿನ್ ಎ ಹೇರಳವಾಗಿದ್ದು, ಇದು ಕಣ್ಣಿನ ಆರೋಗ್ಯ ಮತ್ತು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ಇರುಳುಗುರುಡುತನ ಮತ್ತು ಕಣ್ಣಿನ ಅಕ್ಷಿಪಟಲದ ಸಮಸ್ಯೆಯನ್ನು ನಿವಾರಿಸುತ್ತದೆ.

LEAVE A REPLY

Please enter your comment!
Please enter your name here