ತೆಲಂಗಾಣ: ಸತ್ತಿದ್ದಾನೆ ಅಂತ ತಿಳಿದು ಮನೆಮಂದಿ ಎಲ್ಲ ಅಂತ್ಯಸಂಸ್ಕಾರಕ್ಕೆ ಸಿದ್ಧ ಮಾಡುವಾಗ ಸತ್ತವನು ಇದ್ದಕ್ಕಿದ್ದಂತೆ ಎದ್ದು ಬಂದ್ರೆ.. ಯಾರೂ ಗಾಬರಿಯಾಗದೇ ಇರಲಾರರು. ಇಂತಹದೊಂದು ಆಶ್ಚರ್ಯಕರ ಘಟನೆ ತೆಲಂಗಾಣದಲ್ಲಿ ನಡೆದಿದೆ. 2 ವಾರಗಳ ಕಾಲ ಆಸ್ಪತ್ರೆಯ ಐಸಿಯುನಲ್ಲಿ ಕೋಮಾದಲ್ಲಿದ್ದ ಯುವಕನನ್ನ ಮೃತಪಟ್ಟಿದ್ದಾನೆ ಅಂತ ವೈದ್ಯರು ಹೇಳಿದ ಬಳಿಕವೂ ಬದುಕಿ ಬಂದಿದ್ದಾನೆ!

ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಪಿಲ್ಲಾಲಮರಿ ಗ್ರಾಮದ 18 ವರ್ಷದ ಗಾಂಧಮ್​ ಕಿರಣ್​ ಎನ್ನುವ ಯುವಕ ತೀವ್ರ ವಾಂತಿ-ಭೇದಿಯಿಂದ ಬಳಲುತ್ತಿದ್ದ. ಜೂನ್​ 26ರಂದು ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕಿರಣ್​ನನ್ನ ದಾಖಲು ಮಾಡಲಾಗಿತ್ತು. ಸರ್ಕಾರಿ ವೈದ್ಯರು ಕಿರಣ್​ಗೆ ತೀವ್ರವಾದ ಹೆಪಟೈಟಿಸ್​ ಕಾಯಿಲೆ ಬಂದಿದೆ. ಹೈದರಾಬಾದ್​ಗೆ ಕರೆದುಕೊಂಡು ಹೋಗಿ ಎಂದಿದ್ದಾರೆ.

 

ಬಳಿಕ ತಾಯಿ ಸೈದಮ್ಮ ತನ್ನ ಪುತ್ರನನ್ನ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಕಿರಣ್​ ಕೋಮಾಕ್ಕೆ ಹೋಗಿದ್ದ. ಐಸಿಯುನಲ್ಲಿಟ್ಟು ನುರಿತ ತಜ್ಞ ವೈದ್ಯರನ್ನ ಆಸ್ಪತ್ರೆಗೆ ಕರೆಸಿ ಚಿಕಿತ್ಸೆ ನೀಡಿದ್ರೂ ಕಿರಣ್​ ಸ್ಪಂದಿಸುತ್ತಿರಲಿಲ್ಲ. ಕೊನೆಯದಾಗಿ ನಿಮ್ಮ ಮಗನಿಗೆ ಬ್ರೈನ್​ಡೆಡ್​ ಆಗಿದೆ. ಬದುಕುಳಿಯುವುದು ಡೌಟ್​. ಬಾಡಿಯನ್ನ ಮನೆಗೆ ತೆಗೆದುಕೊಂಡು ಹೋಗಿ ಅಂತ ವೈದ್ಯರು ಹೇಳಿದ್ದಾರೆ.

ಬೇರೆ ದಾರಿ ಕಾಣದ ಸೈದಮ್ಮ, ನನ್ನ ಮಗ​ ಊರಲ್ಲಿಯೇ ಉಸಿರು ಬಿಡಲಿ ಅಂತ ಕರೆದುಕೊಂಡು ಹೋಗಿದ್ದಾರೆ. ಕಿರಣ್​ ಯಾವುದೇ ಟ್ರೀಟ್​​ಮೆಂಟ್​ಗೆ ಸ್ಪಂದಿಸದ ಕಾರಣ ಮೃತಪಟ್ಟಿದ್ದಾನೆಂದು ಎಲ್ಲ ಬಂಧು-ಬಾಂಧವರು ಮನೆಗೆ ಆಗಮಿಸಿ, ಟೆಂಟ್​, ಬ್ಯಾನರ್​ ಹಾಕಿ ಕಿರಣ್​ ಶವವಿಟ್ಟು ರಾತ್ರಿಯೆಲ್ಲಾ ಅಳವುದು, ಭಜನೆ ಮಾಡುವುದನ್ನ ಮಾಡಿದ್ದರು. ಇನ್ನೇನು ಸ್ಮಶಾನಕ್ಕೆ ಶವ ತೆಗೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ಕಿರಣ್​ ಕಣ್ಣುಬಿಟ್ಟಿದ್ದ. ತನಗೆ ಏನೂ ಆಗಿಲ್ಲ ಅನ್ನೋ ರೀತಿ ಎದ್ದು ಕುಳಿತಿದ್ದ. ಅತ್ತ ನೆರೆದಿದ್ದವರಿಗೂ ಅಚ್ಚರಿ. ತಾಯಿ ಸೈದಮ್ಮಳಿಗೂ ಅಚ್ಚರಿ ಮೇಲೆ ಅಚ್ಚರಿ.

LEAVE A REPLY

Please enter your comment!
Please enter your name here