ಸತತ ಆರು ಗಂಟೆಗಳ ಕಾಲ ಪಬ್‌ಜಿ ಗೇಮ್ ಆಡಿ 16 ವರ್ಷದ ಬಾಲಕಯೋರ್ವ ಹೃದಯಾಘಾತದಿಂದ ನಿಧನರಾಗಿರುವ ಆಘಾತಕಾರಿ ಸುದ್ದಿ ಮಧ್ಯಪ್ರದೇಶದ ನೀಮುಚ್ ನಗರದಲ್ಲಿ ವರದಿಯಾಗಿದೆ. ಸತತವಾಗಿ 6 ಗಂಟೆಗಳ ಕಾಲ ಪಬ್‌ಜಿ ಆಟವಾಡಿದ್ದ ಕಾರಣ ಹೃದಯಾಘಾತಕ್ಕೊಳಗಾಗಿ ‘ಫುರ್ಕಾನ್ ಖುರೇಷಿ’ ಎಂಬ ಹದಿಹರೆಯದ ಯುವಕನೋರ್ವ ಸಾವನಪ್ಪಿದ್ದಾನೆ.

ಹೌದು, ಮೇ 28ರಂದು ಈ ಘಟನೆ ನಡೆದಿದ್ದು, ಫುರ್ಕಾನ್ ಹಾಗೂ ಅವನ ಕುಟುಂಬವು ಸಂಬಂಧಿಕರ ಮದುವೆಗೆ ಹೋಗಿದ್ದರು. ಆದರೆ, ಪಬ್‌ಜಿ ವ್ಯಸನಿಯಾಗಿದ್ದ ಫುರ್ಕಾನ್ ಊಟವಾದ ತಕ್ಷಣ ಆಟವಾಡುವುದರಲ್ಲಿ ತಲ್ಲೀನನಾಗಿದ್ದ. ಈ ವೇಳೆಯಲ್ಲಿ ಇದ್ದಕ್ಕಿದ್ದಂತೆ ಜೋರಾಗಿ ಕೂಗಲು ಆರಂಭಿಸಿದ ನಂತರ ಕುಸಿದು ಬಿದ್ದ ಎಂದು ಬಾಲಕನ ತಂದೆ ಮಾಧ್ಯಮಗಳಿಗೆ ಹೇಳಿದ್ದಾರೆ.

 

ಆತ ಕುಸಿದುಬಿದ್ದ ನಂತರ ಕುಟುಂಬದವರು ಅವನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆತ ಬ್ಲಾಸ್ಟ್ ಮಾಡು, ಬ್ಲಾಸ್ಟ್ ಮಾಡು ಎಂದು ಇದ್ದಕ್ಕಿದ್ದಂತೆ ಕೂಗುತ್ತಿದ್ದ. ಬಳಿಕ, ಇಯರ್ ಫೋನ್‌ ತೆಗೆದು ಮೊಬೈಲ್ ಫೋನ್‌ ಬಿಸಾಕಿ ಅಳಲು ಆರಂಭಿಸಿದ. ಜತೆಗೆ, ಅಯಾನ್‌, ನಾನು ನಿನ್ನ ಜತೆಗೆ ಆಟವಾಡುವುದಿಲ್ಲ. ನೀನು ನನ್ನನ್ನು ಸೋಲಿಸಿದೆ ಎಂದು ಹೇಳುತ್ತಿದ್ದ. ಇದರಿಂದ ಮನನೊಂದು ಆತನ ಹೃದಯದ ಬಡಿತ ನಿಂತಿರಬಹುದು ಎಂದು ಫುರ್ಕಾನ್ ಸಹೋದರಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here