ಬೆಂಗಳೂರು, ಜೂನ್ 12: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ನಡುವೆ ಎಲಿವೇಟೆಡ್ ರಸ್ತೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸರ್ಕಾರ ಕೇಳಿದೆ.

ಈ ಮೊದಲು ರಾಮನಗರ ಚೆನ್ನಪಟ್ಟಣ ನಡುವೆ ಬೈಪಾಸ್‌ ರಸ್ತೆಯನ್ನು ನಿರ್ಮಾಣ ಮಾಡುವ ಪ್ರಸ್ತಾಪವಿತ್ತು ಆದರೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸುವಂತೆ ಸರ್ಕಾರ ಕೇಳಿದೆ.

ಬೆಂಗಳೂರು-ಮೈಸೂರು ರಸ್ತೆ ಹೊರತುಪಡಿಸಿ ದಾಂಡೇಲಿ-ಬೆಂಗಳೂರು 1008 ಕೋಟಿ, ಚನ್ನಪಟ್ಟಣ ಬೈಪಾಸ್ ರಸ್ತೆಯನ್ನು 451 ಕೋಟಿ ವೆಚ್ಚದಲ್ಲಿ 4 ಪಥವಾಗಿ ವಿಸ್ತರಣೆ ಮಾಡಲಾಗುತ್ತದೆ. ರಾಜ್ಯದಲ್ಲಿ ಕೆಶಿಪ್‌ನಲ್ಲಿ 1,700 ಕಿ.ಮೀ ರಸ್ತೆ 25 ಸಾವಿರ ಕೋಟಿ ಯೋಜನೆ ಚಾಲನೆಯಲ್ಲಿದೆ

ಕೆಶಿಪ್‌ ಯೋಜನೆಗೆ ವಿಶ್ವಬ್ಯಾಂಕ್‌ನಿಂದ 2100 ಕೋಟಿ ಧೀರ್ಘಾವದಿ ಸಾಲ ಪಡೆಯಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಯನ್ನು ದಶಪಥ ರಸ್ತೆಯನ್ನಾಗಿ ನಿರ್ಮಾಣ ಮಾಡುತ್ತಿದೆ. ಐದು ಸಾವಿರ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ.

ಈ ಯೋಜನೆಯಲ್ಲಿ ಬಿಡದಿವರೆಗೆ 7 ಕಿ.ಮೀ, ರಾಮನಗರ-ಚೆನ್ನಪಟ್ಟಣ(22.5ಕಿ.ಮೀ)ಮಂಡ್ಯ(9ಕಿ.ಮೀ) ಶ್ರೀರಂಗ ಪಟ್ಟಣ(7 ಕಿ.ಮೀ) ದೂರ ಬೈಪಾಸ್ ನಿರ್ಮಾಣ ಮಾಡಲು ತೀರ್ಮಾನಿಸಿತ್ತು. ಆದರೆ ಆ ಮಾರ್ಗದಲ್ಲಿರುವ ರೈತರು ಜಮೀನು, ಆಸ್ತಿಗಳನ್ನು ಉಳಿಸಲು ಸರ್ಕಾರ ಮುಂದಾಗಿತ್ತು, ಬೈಪಾಸ್ ಬದಲು ಎಲಿವೇಟೆಡ್ ಕಾರಿಡಾರ್ ನಿರ್ಮಿಸಿ ಎಂದು ಹೇಳಿದೆ.

 

 

 

LEAVE A REPLY

Please enter your comment!
Please enter your name here