ಮೊಟ್ಟೆ ತಿಂದರೆ ಒಬೆಸಿಟಿ ಬರುತ್ತದೆ, ಮಧುಮೇಹ ಬರುತ್ತದೆ ಎಂದೆಲ್ಲಾ ತಪ್ಪಾಗಿ ಚಿತ್ರಿಸಲಾಗಿದೆ. ಮೊಟ್ಟೆ ಬಗ್ಗೆ ಇತ್ತೀಚೆಗೆ ಮಾಡಿರುವ ಸಮೀಕ್ಷೆಗಳು ಮೊಟ್ಟೆ ಕುರಿತ ತಪ್ಪು ಕಲ್ಪನೆ ಬೇಡ, ಇದರಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ ಎಂಬುವುದಾಗಿ ಹೇಳಿದೆ. ಅದರಲ್ಲೂ ಬ್ರೇಕ್‌ಫಾಸ್ಟ್‌ಗೆ ತಿಂದರೆ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು.

ಮೊಟ್ಟೆಯಲ್ಲಿರುವ ಪೋಷಕಾಂಶಗಳು 
ಒಂದು ಮೊಟ್ಟೆಯಲ್ಲಿ 75 ಕ್ಯಾಲೋರಿ, 5 ಗ್ರಾಂ ಕೊಬ್ಬು, 80 ಮಿ.ಗ್ರಾಂ ಕೊಲೆಸ್ಟ್ರಾಲ್(ಇದು ಆರೋಗ್ಯಕರ ಕೊಲೆಸ್ಟ್ರಾಲ್‌ ಆಗಿದೆ), 1.6 ಗ್ರಾಂ ಸ್ಯಾಚುರೇಟಡ್‌ ಫ್ಯಾಟ್‌ ಹಾಗೂ ಅಲ್ಪ ಪ್ರಮಾಣದಲ್ಲಿ ವಿಟಮಿನ್‌ ಎ, ಡಿ, ವಿಟಮಿನ್‌ ಬಿ6, ಕಬ್ಬಿಣದಂಶ ಹಾಗೂ ವಿಟಮಿನ್‌ ಬಿ 12.
ಮೊಟ್ಟೆ ತಿನ್ನುವುದರಿಂದ ಸಿಗುವ ಆರೋಗ್ಯಕರ ಗುಣಗಳು.

ಮೂಳೆಗಳು ಬಲವಾಗುತ್ತವೆ 
ಇದರಲ್ಲಿ ವಿಟಮಿನ್‌ ಡಿ ಹಾಗೂ ಕ್ಯಾಲ್ಸಿಯಂ ಇದ್ದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಯನ್ನು ಡಯಟ್‌ನಲ್ಲಿ ಸೇರಿಸಿದರೆ ಸಂಧಿವಾತ ತಡೆಗಟ್ಟಬಹುದು.

ಮಧುಮೇಹಿಗಳೂ ತಿನ್ನಬಹುದು 
ವಾರದಲ್ಲಿ 12 ಮೊಟ್ಟೆಗಳವರೆಗೆ ತಿನ್ನಬಹುದೆಂದು ಇತ್ತೀಚೆಗೆ ನಡೆಸಿದ ಅಧ್ಯಯನ ಹೇಳಿದೆ.

ಹೃದಯದ ಆರೋಗ್ಯಕ್ಕೂ ಒಳ್ಳೆಯದು 
ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್‌ ಇರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಾವನೆ ಇದೆ. ಆದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯ ಕೊಲೆಸ್ಟ್ರಾಲ್‌ ಅವಶ್ಯಕ. ಅದು ಮೊಟ್ಟೆಯಲ್ಲಿದೆ.

ಕೂದಲು ಹಾಗೂ ಉಗುರಿನ ಆರೋಗ್ಯ 
ಮೊಟ್ಟೆ ತಿನ್ನುವುದರಿಂದ ಆರೋಗ್ಯಕರ ಕೂದಲು ಹಾಗೂ ಉಗುರು ಪಡೆಯಬಹುದು.

ತೂಕ ಕಮ್ಮಿ ಮಾಡುತ್ತೆ 
ತೂಕ ಕಮ್ಮಿಯಾಗ ಬಯಸುವವರು ಡಯಟ್‌ನಲ್ಲಿ ಸೇರಿಸಬಹುದಾದ ಆರೋಗ್ಯಕರ ಫುಡ್ ಇದಾಗಿದೆ.

ಕಣ್ಣಿನ ಆರೋಗ್ಯ 
ಪ್ರತಿನಿತ್ಯ ಮೊಟ್ಟೆ ತಿನ್ನುವುದರಿಂದ ಕಣ್ಣಿನ ಆರೋಗ್ಯ ಹೆಚ್ಚುವುದು.

LEAVE A REPLY

Please enter your comment!
Please enter your name here