ಸಾಮಾಜಿಕ ಜಾಲತಾಣಗಳಾದ ಪೇಸ್ ಬುಕ್ , ವಾಟ್ಸಾಪ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ತೊಂದರೆಯಿಂದ ಬುಧವಾರ ಬಳಕೆದಾರರು ತೊಂದರೆ ಅನುಭವಿಸಿದರು. ತಾಂತ್ರಿಕ ತೊಂದರೆಯಾಗಿ ಕ್ರ್ಯಾಷ್‌ ಆಗಿದ್ದ ಕಾರಣಕ್ಕೆ ಕೆಲ ಕಾಲ ಸರ್ವರ್ ಡೌನ್ ಆಗಿ ಕೆಲಸ ಮಾಡುವುದು ನಿಂತಿತ್ತು. ಬುಧವಾರ ರಾತ್ರಿ 7.30ರ ಸುಮಾರಿಗೆ ಈ ತೊಂದರೆ ಕಾಣಿಸಿಕೊಂಡು ಹಲವಾರು ಗಂಟೆಗಳ ಕಾಲ ಗ್ರಾಹಕರು ಪರದಾಡಿದರು.ಭಾರತ, ಅಮೆರಿಕ, ಯುರೋಪ್ ಸೇರಿದಂತೆ ವಿಶ್ವದ ಹಲವು  ದೇಶಗಳಲ್ಲಿ ಸಾಮಾಜಿಕ ಜಾಲತಾಣ ತನ್ನ ಕೆಲಸ ನಿಲ್ಲಿಸಿತ್ತು. ಹೀಗಾಗಿ ಗ್ರಾಹಕರು ಫೋಟೋ, ವಿಡಿಯೋ ಡೌನ್ ಲೋಡ್ ಮಾಡಲು ಮತ್ತು ಸಂದೇಶ ಸ್ವೀಕರಿಸಲು ಮತ್ತು ಕಳುಹಿಸಲು ಹರಸಾಹಸ ಪಟ್ಟರು.

 

ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

 

ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಕಡೆಯಿಂದ ಶೀಘ್ರದಲ್ಲಿ ವಾಟ್ಸಾಪ್ ಬಳಕೆದಾರರಿಗೆ ಕಹಿ ಸುದ್ದಿ ಇದೆ. ಶೀಘ್ರದಲ್ಲಿ ಮೋದಿ ಸರ್ಕಾರವು ವಾಟ್ಸಾಪ್ ಬಳಕೆಗೆ ಸಮಯದ ನಿರ್ಬಂಧ ಹೇರಲಿದೆ. ಮಾತ್ರವಲ್ಲ ಹುಸಿ ಸಂದೇಶ ಮತ್ತು ನಿರ್ಬಂಧಿತ ಸಂದೇಶಗಳನ್ನು ಕಳುಹಿಸಿದರೆ ಬಳಕೆದಾರರಿಗೆ ತಿಂಗಳಿಗೆ 499 ರೂ. ದಂಢ ವಿಧಿಲಾಗುತ್ತದೆ ಎಂದು ಕಳೆದ ಹಲವು ದಿನಗಳಿಂದ ಸಂದೇಶ ರವಾನೆಯಾಗುತ್ತಿದೆ.

ಮಾತ್ರವಲ್ಲ ಭಾರತದಲ್ಲಿ ಪ್ರತಿದಿನ ರಾತ್ರಿ 11:30 ರಿಂದ 6:00 ಗಂಟೆಯವರೆಗೆ ವಾಟ್ಸಾಪ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ ಎಂದು ಸುಳ್ಳು ಸುದ್ದಿ ಹಬ್ಬಿದೆ. ಜೊತೆಗೆ ಈ ಸಂದೇಶವನ್ನು ಮುಂದಿನ 48 ಗಂಟೆಗಳಲ್ಲಿ ಕನಿಷ್ಠ 10 ಜನರಿಗೆ ಪಾರ್ವರ್ಡ್ ಮಾಡದಿದ್ದರೆ. ಅಂತವರ ವಾಟ್ಸಾಪ್ ಖಾತೆಯನ್ನು ಅಮಾನ್ಯ ಗೊಳಿಸಲಾಗುತ್ತದೆ ಎಂದೆಲ್ಲ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಂತಹ ಯಾವುದೇ ಸುಳ್ಳು ಸುದ್ದಿಯನ್ನು ಗ್ರಾಹಕರು ನಂಬಬಾರದು.

ಇಲಾಖೆಯಿಂದ ಅಂತಹ ಯಾವುದೇ ಸಂದೇಶ ಜಾರಿಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಸುಳ್ಳು ಸಂದೇಶದಲ್ಲಿ ಉಲ್ಲೇಖಿಸಿರುವ ಯಾವುದೇ ವಿಚಾರವು ಸತ್ಯವಲ್ಲ. ಸರ್ಕಾರವು ಯಾವುದೇ ನಿರ್ಬಂಧಗಳನ್ನು ಗ್ರಾಹಕರ ಮೇಲೆ ಹೇರಿಲ್ಲ. ಅಥವಾ ಸಾಮಾಜಿಕ ಜಾಲತಾಣದ ಕಂಪೆನಿಯು ಭಾರತದಲ್ಲಿರುವ ತನ್ನ ಬಳಕೆದಾರರ ಮೇಲೆ ಯಾವುದೇ ಶುಲ್ಕ ವಿಧಿಸುವ ಬಗ್ಗೆ ಯೋಜನೆ ಕೂಡ ಮಾಡಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ಬಳಕೆದಾರರು ಯಾವುದೇ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂಬುದು ದೃಢವಾಗಿದೆ.

LEAVE A REPLY

Please enter your comment!
Please enter your name here