ಎಷ್ಟೋ ಜನರು ಮಾನಸಿಕ ಒತ್ತಡದಿಂದಾಗಿ ನಿದ್ದೆ ಬಾರದೆ ಒದ್ದಾಡುತ್ತಾರೆ. ಕೆಲವರಂತೂ ನಿದ್ದೆಗಾಗಿ ನಿದ್ದೆ ಮಾತ್ರೆಗೆ ಮೊರೆ ಹೋಗಿರುತ್ತಾರೆ. ದಿನಾ ನಿದ್ದೆ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಅದರಿಂದ ಅಡ್ಡಪರಿಣಾಮ ಉಂಟಾಗಿ ಮತ್ತಷ್ಟು ಆರೋಗ್ಯ ಸಮಸ್ಯೆ ಉಂಟಾಗುತ್ತದೆ.

ಆದರೆ ಯಾವುದೇ ಅಡ್ಡಪರಿಣಾಮವಿಲ್ಲದ, ಆರೋಗ್ಯದ ಗುಣವನ್ನೇ ಹೊಂದಿರುವ ಕಬ್ಬಿನಲ್ಲಿದೆ ನಿದ್ರಾಹೀನತೆಗೆ ಮದ್ದು.

ಎಲ್ಲವನ್ನು ಮರೆತು ಸುಖ ನಿದ್ದೆ ಮಾಡಬೇಕೆಂದು ಬಯಸುವುದಾದರೆ ಒಂದು ಲೋಟ ಕಬ್ಬಿನ ಜ್ಯೂಸ್ ಕುಡಿದರೆ ಸಾಕು. ಕಬ್ಬಿನ ಜ್ಯೂಸ್‌ ನಿದ್ದೆಗೆ ಸಹಕಾರಿ ಎಂದು ಭಾರತೀಯ ವಿಜ್ಞಾನಿಗಳು ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ.

ಅಕ್ಕಿಯ ಹೊಟ್ಟು, ವ್ಹೀಟ್‌ ಜೆರ್ಮ್‌ ಆಯಿಲ್‌, ಜೇನು ಮೇಣ , ಕಬ್ಬು ಇವುಗಳಲ್ಲಿ ಆಕ್ಟಕೋಸನಾಲ್ ಅಂಶವಿದೆ. ಕಬ್ಬಿನ ಹಾಲು ಕುಡಿಯುವುದರಿಂದ ದೇಹಕ್ಕೆ ಗುಣವೇ ಹೊರತು ಯಾವುದೇ ಅಡ್ಡ ಪರಿಣಾಮಗಳಿಲ್ಲ.

ಆದ್ದರಿಂದ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಮಲಗುವ ಕೆಲ ಗಂಟೆಗಳ ಮುನ್ನ ಒಂದು ಲೋಟ ಕಬ್ಬಿನ ಹಾಲು ಕುಡಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದು.

LEAVE A REPLY

Please enter your comment!
Please enter your name here