ಭಾರತೀಯರು ಅದರಲ್ಲೂ ಆಯುರ್ವೇದಲ್ಲಿ ಅರಶಿನಕ್ಕೆ ವಿಶೇಷವಾದ ಸ್ಥಾನಮಾನವಿದೆ. ಅರಶಿನದಲ್ಲಿ ಇರುವಂತಹ ಔಷಧೀಯ ಗುಣಗಳಿಂದಾಗಿ ಇಂದಿಗೂ ಹಲವಾರು ರೀತಿಯ ಆಹಾರ ಮತ್ತು ಔಷಧಿಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಕೆಲವೊಂದು ಸೌಂದರ್ಯವರ್ಧಕಗಳಲ್ಲಿಯೂ ಇದನ್ನು ಬಳಸಲಾಗುತ್ತದೆ. ನಮ್ಮ ಹಿರಿಯರು ಸೌಂದರ್ಯವರ್ಧಕವಾಗಿ ಅರಶಿನವನ್ನು ಬಳಸಿಕೊಂಡು ಬಂದಿದ್ದಾರೆ. ಇದು ಸೌಂದರ್ಯವನ್ನು ವೃದ್ಧಿಸುವ ಜತೆಗೆ ನಮ್ಮ ಚರ್ಮದಲ್ಲಿರುವಂತಹ ಸೋಂಕನ್ನು ಕೂಡ ನಿವಾರಣೆ ಮಾಡುವಂತಹ ಗುಣವನ್ನು ಹೊಂದಿದೆ.

ಅರಿಶಿನದಲ್ಲಿ ಉರಿಯೂತ ಶಮನಕಾರಿ ಗುಣವಿದೆ 
ಗಿಡಮೂಲಿಕೆ ಬೇರಾಗಿರುವ ಅರಿಶಿನದಲ್ಲಿ ಉರಿಯೂತ ಶಮನಕಾರಿ ಗುಣವಿದೆ. ಇದು ಬಾಹ್ಯ ಹಾಗೂ ಆಂತರಿಕವಾಗಿ ಶಮನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಅರಶಿನ ಬಳಸಿಕೊಂಡು ಸಂಧಿವಾತ ನಿವಾರಣೆ ಮಾಡಬಹುದಾಗಿದೆ. ಅರಶಿನದಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವಂತಹ ಅಂಶವು ಉರಿಯೂತ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಗಂಟು ನೋವಿನ ಸಮಸ್ಯೆಯಾಗಿರುವ ಸಂಧಿವಾತಕ್ಕೆ ಇದು ಪರಿಹಾರವಾಗಿದೆ. ಇದು ಗಂಟಿನ ಆರೋಗ್ಯವನ್ನು ಸುಧಾರಣೆ ಮಾಡಿಕೊಂಡು ಸಂಧಿವಾತದ ನೋವನ್ನು ಕಡಿಮೆ ಮಾಡುವುದು. ಸಂಧಿವಾತಕ್ಕೆ ಅರಶಿನವನ್ನು ಮೂರು ವಿಧದಿಂದ ಬಳಕೆ ಮಾಡಬಹುದು. ಮೊದಲನೇಯದಾಗಿ ಪಾನೀಯ, ಆಹಾರ ಅಥವಾ ಅದನ್ನು ಗಂಟಿಗೆ ಹಚ್ಚಿಕೊಳ್ಳುವ ಮೂಲಕವಾಗಿ ಇದರ ಲಾಭಗಳನ್ನು ಪಡೆಯಬಹುದು. ಸಂಧಿವಾತಕ್ಕೆ ಅರಶಿನದ ಲಾಭಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ.

ಸಂಧಿವಾತದ ನೋವಿಗೆ 
ಅದಾಗ್ಯೂ, ಆದರೆ ಈ ಔಷಧಿಯು ಪ್ರತಿಯೊಬ್ಬರಿಗೂ ಹೊಂದಿಕೊಳ್ಳುವುದಿಲ್ಲ. ಅರಿಶಿನವನ್ನು ನೀವು ಸಂಧಿವಾತದ ನೋವಿಗೆ ಬಳಸಿಕೊಳ್ಳಬಹುದು. ಆದರೆ ಅರಶಿನದ ಅಲರ್ಜಿ, ಗರ್ಭಿಣಿಯರು ಅಥವಾ ಬಾಣಂತಿಯರು, ಫಲವತ್ತತೆ ಸಮಸ್ಯೆ ಇರುವವರು, ಕಬ್ಬಿನಾಂಶ ಕೊರತೆ ಇರುವವರು, ಕಿಡ್ನಿ ಮತ್ತು ಮೂತ್ರಕೋಶದ ಕಲ್ಲಿನ ಸಮಸ್ಯೆ ಇರುವವರು, ಮಧುಮೇಹದ ಔಷಧಿ ಸೇವಿಸುವವರು ಈ ಔಷಧಿ ಸೇವೆ ಮಾಡಬಾರದು. ಈ ಮೇಲೆ ಹೇಳಿರುವಂತಹ ಪರಿಸ್ಥಿತಿಯು ನಿಮಗೆ ಇಲ್ಲವಾದರೆ ಆಗ ನೀವು ಸಂಧಿವಾತದ ಚಿಕಿತ್ಸೆಗೆ ಅರಶಿನ ಬಳಸಿಕೊಳ್ಳಬಹುದು. ಸಂಧಿವಾತ ನಿವಾರಣೆಗೆ ಅರಶಿನ ಬಳಕೆ ಮಾಡುವುದು ಹೇಗೆ ಎಂದು ತಿಳಿಯಿರಿ.

ಅರಿಶಿನ ಚಹಾ 
ಅರಶಿನ ಚಾ ಕುಡಿಯುವ ಕಾರಣದಿಂದ ಸಂಧಿವಾತದ ನೋವನ್ನು ಕಡಿಮೆ ಮಾಡಬಹುದು. ಒಂದು ಕಪ್ ನೀರನ್ನು ಬಿಸಿ ಮಾಡಿ ಮತ್ತು ಇದಕ್ಕೆ ಒಂದು ಚಮಚ ಅರಶಿನ ಹಾಕಿ. ಸ್ವಲ್ಪ ರುಚಿ ಬರಲು ನೀವು ಇದಕ್ಕೆ ತುರಿದ ಒಂದು ತುಂಡು ಶುಂಠಿ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಸರಿಯಾಗಿ ಕುದಿಸಿ ಮತ್ತು ಐದು ನಿಮಿಷ ಕಾಲ ತಣ್ಣಗಾಗಲು ಬಿಡಿ. ಶುಂಠಿ ಮತ್ತು ಅರಶಿನದಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಸಂಧಿವಾತದಿಂದ ಗಂಟುಗಳಲ್ಲಿ ಉಂಟಾಗಿರುವಂತಹ ಊತ ಮತ್ತು ಸೆಳೆತ ತಗ್ಗಿಸುವುದು. ಇದನ್ನು ಪ್ರತಿನಿತ್ಯ ಎರಡು ಸಲ ಸೇವಿಸಿ ಮತ್ತು ಒಂದು ವಾರದಲ್ಲಿ ನಿಮಗೆ ಸುಧಾರಣೆ ಕಂಡುಬರಲಿದೆ.

ಅರಿಶಿನ ಪೇಸ್ಟ್ 
ನೀರನ್ನು ಬಳಸಿಕೊಂಡು ನೀವು ಅರಶಿನ ಪೇಸ್ಟ್ ತಯಾರಿಸಿಕೊಳ್ಳಿ. ಪೇಸ್ಟ್ ತುಂಬಾ ದಪ್ಪಗೆ ಇರಲಿ. ಅರ್ಧ ಕಪ್ ನೀರನ್ನು ನೀರು ಮತ್ತು ¼ ಕಪ್ ಅರಶಿನ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದು ದಪ್ಪಗಿನ ಪೇಸ್ಟ್ ಆಗುವ ತನಕ ಹದ ಬೆಂಕಿಯಲ್ಲಿ ಕುದಿಸಿ. ಇದು ಸುಡದಂತೆ ನೀವು ಇದನ್ನು ತಿರುಗಿಸುತ್ತಾ ಇರಬೇಕು. ಒಂದು ತಿಂಗಳ ಕಾಲ ನೀವು ಈ ಮಿಶ್ರಣವನ್ನು ರೆಫ್ರಿಜರೇಟರ್ ನಲ್ಲಿ ಇಡಬಹುದು. ಈ ಪೇಸ್ಟ್ ನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ತೊಳೆಯಿರಿ. ದಿನದಲ್ಲಿ ಎರಡು ಸಲ ನೀವು ಇದನ್ನು ಬಳಸಿಕೊಂಡರೆ ಪರಿಣಾಮಕಾರಿ ಫಲಿತಾಂಶ ಪಡೆಯಬಹುದು.

ಅರಿಶಿನ ಮತ್ತು ಶುಂಠಿ 
ಇವೆರಡರಲ್ಲಿಯೂ ಕುರ್ಕುಮಿನ್ ಎಂಬ ಪೋಷಕಾಂಶವಿದ್ದು ಇದೊಂದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದೆ. ದೇಹದಲ್ಲಿ ಎದುರಾಗುವ ಉರಿಯೂತವನ್ನು ಕಡಿಮೆಗೊಳಿಸಲು ಈ ಆಂಟಿ ಆಕ್ಸಿಡೆಂಟ್ ಉತ್ತಮವಾಗಿವೆ. ಈ ಪೋಷಕಾಂಶದ ಗರಿಷ್ಟ ಪ್ರಯೋಜನ ಪಡೆಯಲು ಇದನ್ನು ದ್ರವರೂಪದಲ್ಲಿ ಸೇವಿಸುವುದು ಉತ್ತಮ. ಇದಕ್ಕಾಗಿ ದಿನವಿಡೀ ಕೊಂಚಕೊಂಚವಾಗಿ ಅರಿಶಿನ ಮತ್ತು ಶುಂಠಿ ಕುದಿಸಿ ಸೋಸಿದ ಟೀ ಸೇವಿಸುತ್ತಾ ಬರಬೇಕು. ಜೊತೆಗೇ ಈಗತಾನೇ ಅರೆದ ಹಸಿಶುಂಠಿ ಮತ್ತು ಹಸಿ ಅರಿಶಿನದ ಕೊಂಬಿನ ಲೇಪನವನ್ನು ಕೊಂಚ ಬಿಸಿನೀರಿನೊಂದಿಗೆ ಬೆರೆಸಿ ಇದಕ್ಕೆ ಕೊಂಚ ಜೇನ್ಜು ಬೆರೆಸಿ ಸೇವಿಸುವ ಮೂಲಕ ಸಂಧಿವಾತ ಕಡಿಮೆಯಾಗುವ ಜೊತೆಗೇ ದಿನದ ದಣಿವು ಸಹಾ ಮಾಯವಾಗುತ್ತದೆ.

LEAVE A REPLY

Please enter your comment!
Please enter your name here