ಜಾಯಿಕಾಯಿ, ಹಿಂದಿನಿಂದಲೂ ಭಾರತೀಯರು ಸಾಮಾನ್ಯವಾಗಿ ಬಳಸುವ ಮಸಾಲ ವಸ್ತು. ಅಡಕೆಯಂತೆ ಕಾಣುವ, ಸುವಾಸನಾಭರಿತ ಕಾಯಿಯನ್ನು ಅಡುಗೆಯಲ್ಲಷ್ಟೇ ಅಲ್ಲ, ಆಯುರ್ವೇದದಲ್ಲೂ ಬಳಸುತ್ತಾರೆ. ಓಹ್‌, ಇದಾ? ಇದು, ಅಜ್ಜಿಕಾಲದ ಮನೆಮದ್ದು ಎಂದು ಮೂಗು ಮುರಿಯಬೇಡಿ. ಯಾಕಂದ್ರೆ, ಜಾಯಿಕಾಯಿಯಲ್ಲಿ ಔಷಧೀಯ ಗುಣಗಳಿರುವುದು ವೈಜ್ಞಾನಿಕ ಸಂಶೋಧನೆಗಳಲ್ಲೂ ದೃಢಪಟ್ಟಿವೆ.

– ಆಯಂಟಿ ಆಕ್ಸಿಡೆಂಟ್ಸ್‌ಗಳ ಪ್ರಮಾಣ ಹೆಚ್ಚಿರುವುದರಿಂದ ಜಾಯಿಕಾಯಿಯು, ನರಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ.

-ಪಿತ್ಥ, ವಾಕರಿಕೆ, ಹೊಟ್ಟೆನೋವು ಕಾಡಿದಾಗ ಜಾಯಿಕಾಯಿಯ ಕಷಾಯ ಕುಡಿಯಬಹುದು.

-ಹಸಿವು ಹೆಚ್ಚಿಸುವ ಗುಣವೂ ಇದಕ್ಕಿದೆ.

-ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಅಂಶಗಳನ್ನು ಹೊಂದಿರುವ ಜಾಯಿಕಾಯಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಗುಣ ಜಾಯಿಕಾಯಿಗಿದೆ.

-ಜಾಯಿಕಾಯಿಯಲ್ಲಿ ಬಿ-ಕಾಂಪ್ಲೆಕ್ಸ್‌, ವಿಟಮಿನ್‌ ಸಿ, ಫಾಲಿಕ್‌ ಆಯಸಿಡ್‌ ಹೇರಳವಾಗಿವೆ.

-ಜಾಯಿಕಾಯಿಯನ್ನು ತೇಯ್ದು, ಹಚ್ಚಿದರೆ ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ಕಡಿಮೆಯಾಗುತ್ತದೆ.

-ಹಲ್ಲು ಮತ್ತು ಬಾಯಿಗೆ ಸಂಬಂಧಿಸಿದ ಔಷಧಗಳಲ್ಲಿ ಜಾಯಿಕಾಯಿಯನ್ನು ಬಳಸುತ್ತಾರೆ.

-ಜಾಯಿಕಾಯಿಯ ಪುಡಿಯನ್ನು ಮೈಗೆ ಉಜ್ಜಿ ಸ್ನಾನ ಮಾಡುವುದರಿಂದ, ಕಜ್ಜಿ, ತುರಿಕೆ, ಮೊಡವೆಯಂಥ ಚರ್ಮರೋಗಗಳು ಗುಣವಾಗುತ್ತವೆ.

 

LEAVE A REPLY

Please enter your comment!
Please enter your name here