ನಮ್ಮ ದೈನಂದಿನ ಜೀವನದಲ್ಲಿ ನಾವು ಹೊರಗೆ ಸುತ್ತಾಡುತ್ತೇವೆ, ಬಿಸಿಲಿಗೆ ನಮ್ಮ ಮೈಯನ್ನವಡ್ಡಿ ಕೆಲಸ ಮಾಡುತ್ತೇವೆ ಇದರಿಂದಾಗಿ ದೇಹವೆಲ್ಲ ಕಪ್ಪಾಗುರುತ್ತದೆ, ಹಾಗು ಮೋನಾ ಕೈ ಮೊನಾಲ್ಕಾಲುವುಗಳು ಸಹ ಕಪ್ಪಗಿರುತ್ತವೆ. ಇವುಗಳೊಂದಿಗೆ ನಾವು ಕಂಕುಳಿನ ಕೂದಲನ್ನ ತೆಗೆಯಲು ವಿವಿಧ ಬಗೆಯ ರಾಸಾಯನಿಕ ಯುಕ್ತ ಕ್ರೀಮ್ ಗಳನ್ನ ಬಳಸಿ ಕಂಕುಳು ಇನ್ನಷ್ಟು ಕಪ್ಪಾಗುರುತ್ತದೆ. ಇಂತಹ ಸಮಸ್ಯೆಗಳನ್ನ ದೂರ ಮಾಡಲು ಮನೆಯಲ್ಲಿ ಸಿಗುವ ಹಾಗೂ ನಾವು ಪ್ರತಿನಿತ್ಯ ಬಳಸುವ ಪದಾರ್ಥಗಳನ್ನ ಉಪಯೋಗಿಸಿಕೊಂಡು ಕಪ್ಪು ಕಲೆಗಳನ್ನ ದೂರ ಮಾಡಬಹುದು, ಅದು ಹೇಗೆ ಎಂಬುದು ಇಲ್ಲಿವೆ ನೋಡಿ…

* ಆಲೂಗಡ್ಡೆ
ಸ್ವಲ್ಪ ನೀರು, ಸ್ವಲ್ಪ ಆಲೂಗಡ್ಡೆ ತೆಗೆದುಕೊಂಡು ಮಿಕ್ಸಿಯಲ್ಲಿ ಹಾಕಬೇಕು. ಆ ಬಳಿಕ ಬರುವ ಮಿಶ್ರಣವನ್ನು ಕಪ್ಪಾದ ದೇಹದ ಭಾಗಗಳ ಮೇಲೆ ಹಚ್ಚಬೇಕು. ಸ್ವಲ್ಪ ಸಮಯ ಬಿಟ್ಟು ತೊಳೆದುಕೊಳ್ಳಬೇಕು. ಇದು ಮೃತ ಚರ್ಮ ಕಣಗಳನ್ನು ವೇಗವಾಗಿ ತೊಲಗಿಸುತ್ತದೆ.

* ಹಾಲು
ಹಾಲಿನ ವಿವಿಧ ಉತ್ಪನ್ನಗಳು ಚರ್ಮವನ್ನು ಸಂರಕ್ಷಿಸುವ ಹಲವು ಗುಣಗಳನ್ನ ಹೊಂದಿವೆ. ಸ್ವಲ್ಪ ಹಾಲು, ಮೊಸರನ್ನು ತೆಗೆದುಕೊಂಡು ಮಿಶ್ರಣವನ್ನು ಬೆರೆಸಿ ಚರ್ಮಕ್ಕೆ ಹಚ್ಚಬೇಕು. ಇದು ಒಣ ಚರ್ಮದವರಿಗೆ ಉತ್ತಮ.

* ಬೇಕಿಂಗ್ ಸೋಡಾ…
ಒಂದು ಭಾಗ ನೀರು, 3 ಭಾಗ ಬೇಕಿಂಗ್ ಸೋಡಾ ತೆಗೆದುಕೊಂಡು ಮೆತ್ತಗಿನ ಪೇಸ್ಟ್ ತರಹ ಮಾಡಿಕೊಳ್ಳಬೇಕು. ಮಿಶ್ರಣವನ್ನು ಸ್ಮೂತ್ ಆಗುವವರೆಗೂ ಚೆನ್ನಾಗಿ ಕಲೆಸಬೇಕು. ಇದರಿಂದ ಕಪ್ಪಾದ ಭಾಗಗಳ ಮೇಲೆ ನಿತ್ಯ ಎರಡು ಸಲ ಹಚ್ಚಿದರೆ ಪ್ರತಿಫಲ ಸಿಗುತ್ತದೆ.

* ಸೌತೇಕಾಯಿ
ಸೌತೇಕಾಯಿ ಹೋಳುಗಳು ಸ್ವಲ್ಪ, ಸ್ವಲ್ಪ ನಿಂಬೆರಸ, ಅರಿಶಿಣ ಬೆರೆಸಿ ಮಿಕ್ಸಿಯಲ್ಲಿ ಹಾಕಿಕೊಳ್ಳಬೇಕು. ಈ ಮಿಶ್ರಣವನ್ನು ಕಪ್ಪಾದ ಭಾಗಗಳಿಗೆ ಹಚ್ಚಿದರೆ ಉತ್ತಮ ಫಲಿತಾಂಶ ಕಾಣಬಹುದು.

* ಆಲೀವ್ ಎಣ್ಣೆ, ಸಕ್ಕರೆ
ಒಣ ಚರ್ಮ, ಮೃತ ಕಣಗಳನ್ನು ತೊಲಗಿಸುವಲ್ಲಿ ಸಕ್ಕರೆ ಉಪಯೋಗಕ್ಕೆ ಬಂದರೆ, ಚರ್ಮವನ್ನು ಸಂರಕ್ಷಿಸುವಲ್ಲಿ ಆಲೀವ್ ಎಣ್ಣೆ ಸಹಕರಿಸುತ್ತದೆ. ಸ್ವಲ್ಪ ಸಕ್ಕರೆ, ಆಲೀವ್ ಎಣ್ಣೆಯನ್ನು ಸಮವಾಗಿ ತೆಗೆದುಕೊಂಡು ಪೇಸ್ಟ್ ತರಹ ತಯಾರಿಸಿಕೊಳ್ಳಬೇಕು. ಆ ಬಳಿಕ ಆ ಪೇಸ್ಟನ್ನು ದೇಹದ ಭಾಗಗಳ ಮೇಲೆ 5 ರಿಂದ 10 ನಿಮಿಷ ಬಿಟ್ಟು ತೊಳೆದುಕೊಳ್ಳಬೇಕು.

* ನಿಂಬೆಹಣ್ಣು
ಚರ್ಮಕ್ಕೆ ಹೊಳಪನ್ನು, ಬಿಳುಪನ್ನು ನೀಡುವ ಗುಣಗಳು ನಿಂಬೆಯಲ್ಲಿ ಹೆಚ್ಚಾಗಿ ಇವೆ. ಸ್ವಲ್ಪ ನಿಂಬೆ ರಸವನ್ನು ತೆಗೆದುಕೊಂಡು ಕಪ್ಪಾದ ಪ್ರದೇಶದಲ್ಲಿ ಹಚ್ಚಬೇಕು. ಆ ಬಳಿಕ 15 ರಿಂದ 20 ನಿಮಿಷಗಳ ಕಾಲ ಬಿಟ್ಟು ತೊಳೆದುಕೊಳ್ಳಬೇಕು. ಹೀಗೆ ಮಾಡಿದರೆ ಚರ್ಮ ಸಹಜ ಸಿದ್ಧವಾದ ಹೊಳಪನ್ನು ಪಡೆಯುತ್ತದೆ.

* ಅಲೋವೆರಾ ಜೆಲ್
ಬಿಸಿಲಿನ ಕಾರಣ ಕಪ್ಪಾದ ಚರ್ಮವನ್ನು ಮತ್ತೆ ಪೂರ್ವ ಸ್ಥಿತಿಗೆ ತರುವಲ್ಲಿ ಅಲೋವೆರಾ ಜೆಲ್ (ಲೋಳೆಸರ) ತುಂಬಾ ಉಪಯುಕ್ತ. ಸ್ವಲ್ಪ ಆಲೋವೆರಾ ಜೆಲ್ ತೆಗೆದುಕೊಂಡು ಕಪ್ಪಾದ ಪ್ರದೇಶಗಳ ಮೇಲೆ ಹಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ಆ ಬಳಿಕ ನೀರಿನಲ್ಲಿ ತೊಳೆದುಕೊಳ್ಳಬೇಕು. ರೆಗ್ಯುಲರ್ ಆಗಿ ಈ ರೀತಿ ಮಾಡಿದರೆ ಉತ್ತಮ ಫಲಿತಾಂಶ ಸಿಗುವುದರಲ್ಲಿ ಸಂಶಯವಿಲ್ಲ.

* ಬಾದಾಮಿ ಎಣ್ಣೆ
ಚರ್ಮಕ್ಕೆ ಪೋಷಕಾಂಶಗಳನ್ನು ನೀಡುವ ಗುಣಗಳು ಬಾದಾಮಿ ಎಣ್ಣೆಯಲ್ಲಿವೆ. ನಿತ್ಯ ಬಾದಾಮಿ ಎಣ್ಣೆಯನ್ನು ಸ್ವಲ್ಪ ತೆಗೆದುಕೊಂಡು ಚರ್ಮಕ್ಕೆ ಹಚ್ಚಿದರೆ ಫಲಿತಾಂಶ ಇರುತ್ತದೆ. ಚರ್ಮಕ್ಕೆ ಹೊಳಪು ನೀಡುವ ಗುಣ ಬಾದಾಮಿಯಲ್ಲಿದೆ.

LEAVE A REPLY

Please enter your comment!
Please enter your name here