ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಸಾಮಾನ್ಯವಾಗಿ ಮೊಬೈಲ್ ಲ್ಯಾಪ್ ಟಾಪ್ ಮುಂತಾದ ಬೆಲೆ ಬಾಳುವ ವಸ್ತುಗಳು ಕಳೆದುಕೊಳ್ಳುವುದು ಸಹಜವಾಗಿದೆ, ಕೆಲವರು ಇವುಗಳ ಬಗ್ಗೆ ದೂರು ನೀಡದೆ ಸುಮ್ಮನಾಗುತ್ತಾರೆ.
ಇನ್ನುಮುಂದೆ ಈ ವಸ್ತುಗಳು ಕಳೆದುಕೊಂಡಿದ್ದರೆ ಪೊಲೀಸ್ ಠಾಣೆಗೆ ಹೋಗುವ ಅವಶ್ಯಕತೆ ಇಲ್ಲ. ಯಾಕೆಂದರೆ ಪೊಲೀಸ್ ಇಲಾಖೆ ಮಹತ್ವದ app ಬಿಡುಗಡೆ ಮಾಡಿದೆ, ಈ app ಮೂಲಕ ದೂರು ದಾಖಲಿಸಬಹುದು.

ಪೊಲೀಸ್ ಇಲಾಖೆ ಸಾರ್ವಜನಿಕರ ಅನುಕೂಲಕ್ಕಾಗಿ ಈ ಯೋಜನೆಯೊಂದನ್ನು ಆರಂಭಿಸಿದೆ. ಹೀಗಾಗಲೇ ಈ ಆ್ಯಪ್ ಅನ್ನು ಸುಮಾರು ೫೦ ಸಾವಿರ ಕ್ಕೂ ಹೆಚ್ಚು ಜನ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಹೆಚ್ಚು ಮೊಬೈಲ್ ಹಾಗು ಲ್ಯಾಪ್ ಟಾಪ್ ಮುಂತಾದ ಬೆಲೆಬಾಳುವ ವಸ್ತುಗಳ ದೂರು ದಾಖಲಾಗಿವೆ.

ಈ ಆ್ಯಪ್ ಮೂಲಕ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ 300 ಕ್ಕೂ ಹೆಚ್ಚು ಕಳೆದುಕೊಂಡ ಫೋನ್ ಗಳು ತಮ್ಮ ಮಾಲೀಕರ ಕೈ ಸೇರಿವೆ. ಹಾಗಾದರೆ ನೀವು ಕೂಡ ದೂರು ದಾಖಲು ಮಾಡಲು ಬಯಸುವುದಾದರೆ ಮುಂದೆ ನೋಡಿ ..

ಮೊದಲನೆಯದಾಗಿ ಈ ಆ್ಯಪ್ ಹೆಸರು e-lost – report app ಎಂಬುದಾಗಿ ಇದರ ಮೂಲಕ ನೀವು ದೂರು ದಾಖಲಿಸಬಹುದು.
ಈ ಆನ್ ಲೈನ್ ವರದಿ ಕೇವಲ ದೂರುದಾರರಿಗೆ ಮತ್ತು ಪೊಲೀಸ್ ಇಲಾಖೆಯ ಪರಿಶೀಲನೆಗಾಗಿ ಇರುವ ವಿದ್ಯನ್ಮಾನ ದಾಖಲೆಯಾಗಿರುತ್ತದೆ.

ನೆನಪಿರಲಿ
ನಿಮ್ಮ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡರೆ ಮಾತ್ರ ಈ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸಬೇಕಾಗುತ್ತದೆ. ನಿಮ್ಮ ವಸ್ತುಗಳನ್ನು ಯಾರಾದರೂ ಕದ್ದಿದ್ದರೆ ಅಥವಾ ನಿಮ್ಮನ್ನು ಯಾರಾದರೂ ಬೆದರಿಸಿ ಕಿತ್ತುಕೊಂಡಿದ್ದರೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸುವುದನ್ನು ಮರೆಯದಿರಿ.

ಹೆಚ್ಚಿನ ಮಾಹಿತಿಗಾಗಿ e-lost – report app ಅಥವಾ ಆನ್ಲೈನ್ ವೆಬ್ಸೈಟ್ ನಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.

LEAVE A REPLY

Please enter your comment!
Please enter your name here