ನೋಡಲು ಎಷ್ಟು ಸುಂದರವಾಗಿದೆಯೋ. ಅಷ್ಟೇ ಆರೋಗ್ಯಕರ ಹಣ್ಣು ದಾಳಿಂಬೆ. ಆರೋಗ್ಯದ ಆಗರ ದಾಳಿಂಬೆ ಹಣ್ಣು ಎಂದರೇ ತಪ್ಪಾಗುವುದಿಲ್ಲ. ಅಷ್ಟರ ಮಟ್ಟಿಗೆ ಈ ಹಣ್ಣಿನಲ್ಲಿ ಬಹಳಷ್ಟು ಪ್ರಯೋಜನಕಾರಿ ಅಂಶಗಳಿವೆ.

ದಾಳಿಂಬೆ ಹಣ್ಣನ್ನು ದಿನನಿತ್ಯ ಉಪಯೋಗಿಸುವುದರಿಂದ ರಕ್ತಹೀನತೆಯಿಂದ ದೂರವಾಗಬಹುದು. ದಾಳೆಂಬೆ ಹಣ್ಣಿನ ಸೇವನೆಯು ನಮ್ಮ ಅಂದವನ್ನು ಹೆಚ್ಚಿಸುವಂತೆ ಮಾಡುತ್ತದೆ. ಇಷ್ಟೇ ಅಲ್ಲದೇ ದೇಹದಲ್ಲಿ ರಕ್ತದ ಕೊರತೆಯನ್ನು ನೀಗಿಸುತ್ತದೆ.

ಅಂದಹಾಗೆ ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಕುದಿಸಿ ಅದರ ರಸ ಸೇವಿಸಿದರೆ, ಭೇದಿಯಾಗುವುದು ನಿಲ್ಲುತ್ತದೆ.

 

ದಾಳಿಂಬೆ ತಿಂದ ನಂತರ ಅದರ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡರೆ, ಭೇದಿಯಾಗುವಾಗ ಇದರ ಕಷಾಯ ತಯಾರಿಸಿ ಕುಡಿಯಬಹುದಾಗಿದೆ.

ಮೂಳೆಗಳು ದೃಢವಾಗಿರುತ್ತವೆ, ರಕ್ತನಾಳಗಳ್ಳಿನ ಅಡ್ಡಿಗಳು ನಿವಾರಣೆಯಾಗುತ್ತವೆ. ಬಿಪಿ ಕಡಿಮೆಯಾಗುತ್ತದೆ. ರಕ್ತ ಹೆಚ್ಚುತ್ತದೆ. ರಕ್ತ ಸಂಚಲನೆ ಸಹ ಚೆನ್ನಾಗಿ ಆಗುತ್ತದೆ.

ದಂತ ಸಮಸ್ಯೆಗಳು ಬರುವುದಿಲ್ಲ. ವಸಡಿನ ಊತ, ನೋವು ನಿವಾರಣೆಯಾಗುತ್ತದೆ. ಬಾಯಿಯ ದುರ್ವಾಸನೆ ಹೋಗುತ್ತದೆ.

ಚರ್ಮ ಕಾಂತಿಯುತವಾಗಿ, ಮೃದುವಾಗಿ ಬದಲಾಗುತ್ತದೆ. ಹಾಗೂ ಕೂದಲು ಸೊಂಪಾಗಿ, ದೃಢವಾಗಿ ಬೆಳೆಯುತ್ತದೆ.

ರಕ್ತದಲ್ಲಿರುವ ಕೆಟ್ಟ ಕೊಲೆಸ್ರ್ಟಾಲ್ ನಿವಾರಣೆಯಾಗಿ ಒಳ್ಳೆಯ ಕೊಲೆಸ್ರ್ಟಾಲ್ ಹೆಚ್ಚುತ್ತದೆ. ಈ ಮೂಲಕ ಹೃದಯ ರೋಗಗಳು ಬರುವುದಿಲ್ಲ.

ಸಂತಾನಹೀತನೆಯಿಂದ ಬಳಲುವವರಿಗೆ ದಾಳಿಂಬೆ ಹಣ್ಣು ಒಂದು ರೀತಿ ವರ ಎಂದು ಹೇಳಬಹುದು. ಯಾಕೆಂದರೆ ಈ ಹಣ್ಣನ್ನು ದಂಪತಿಗಳಿಬ್ಬರು ಪ್ರತಿನಿತ್ಯ ತಿಂದರೆ ಅವರ ಲೈಂಗಿಕ ಸಮಸ್ಯೆಗಳು ನಿವಾರಣೆ ಜತೆಗೆ, ಶೃಂಗಾರ ಸಾಮರ್ಥ್ಯ ಸಹ ಹೆಚ್ಚುತ್ತದೆ. ಮಹಿಳೆಯರಲ್ಲಿ ಋತುಚಕ್ರ ಸಕ್ರಮವಾಗಿ ಆಗುತ್ತದೆ. ಈ ಮೂಲಕ ಸಂತಾನಭಾಗ್ಯ ಆಗುವ ಅವಕಾಶಗಳು ಹೆಚ್ಚು.

ಪದೇ ಪದೇ ವಾಂತಿಯಾಗುತ್ತಿದ್ದರೆ, ಜೌಷಧಿ ಜೊತೆ ಜೊತೆಗೆ, ದಾಳಿಂಬೆ ಹಣ್ಣಿನ ರಸವನ್ನು ಸೇವಿಸುತ್ತಿದ್ದರೆ ನಿತ್ರಾಣವಾಗುವುದನ್ನು ತಡೆಯಬಹುದಾಗಿದೆ.

LEAVE A REPLY

Please enter your comment!
Please enter your name here