ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್‍ ಅವರು ಸ್ಟಾರ್ ನಟರಾಗಿ ಮಾತ್ರವಲ್ಲದೇ ಅಭಿಮಾನಿಗಳ ಕಷ್ಟಕ್ಕೆ ಸ್ಪಂದಿಸುವ ಭಾವನಾಜೀವಿಯೂ ಹೌದು. ಇತ್ತೀಚೆಗೆ ಅವರು ಆಪ್ತ ರಕ್ಷಕ ಎಂಬಷ್ಟು ಸಾಮಾಜಿಕ ಕಳಿಕಳಿ ತೋರಿಸುತ್ತಿದ್ದಾರೆ. ಮಂಡ್ಯ ಚುನಾವಣಾ ಪ್ರಚಾರದಲ್ಲೂ ತಮ್ಮ ಖದರ್ ತೋರಿಸಿರುವ ನಟ ದರ್ಶನ್, ಅಭಿಮಾನಿಗಳಲ್ಲಿ ಬಹಳಷ್ಟು ಭವಿಷ್ಯದ ಭರವಸೆ ಸಹ ಮೂಡಿಸಿದ್ದಾರೆ.

ಇದೀಗ ಬೆಂಗಳೂರಿನಲ್ಲಿ ಹೆಣ ಸುಡುವ ಕೆಲಸ ಮಾಡ್ತಿರುವ ಅಂಥೋನಿ ಸ್ವಾಮಿ ಎಂಬವರು ಕೂಡಾ ತಮ್ಮ ಕಷ್ಟದ ಬಗ್ಗೆ ಹೇಳಿಕೊಂಡು ನಟ ದರ್ಶನ್ ಅವರಿಗೆ

 

ಪತ್ರ ಬರೆದಿದ್ದಾರೆ. ಆ ಪತ್ರವನ್ನು ಓದಿದ ದರ್ಶನ್ ಗದ್ಗದಿತರಾಗಿದ್ದಾರಂತೆ. ಅಂಥೋನಿ ಸ್ವಾಮಿ ಅವರು ಆ ಪತ್ರದಲ್ಲಿ “ನಾನು ಕಲ್ಲಳ್ಳಿ ಸ್ಮಶಾನದಲ್ಲಿ ಕಳೆದ 30 ವರ್ಷಗಳಿಂದ ಹೆಣ ಸುಡುವ ಕೆಲಸ ಮಾಡಿಕೊಂಡಿದ್ದೇನೆ. ನನ್ನಂತೆಯೇ ಇಲ್ಲಿ ಕೆಲಸ ಮಾಡುವವರ ಮನೆಗಳ ಪರಿಸ್ಥಿತಿಯೂ ಸರಿಯಿಲ್ಲ. ಅವರೆಲ್ಲರಿಗೂ ಸ್ಮಶಾನದಲ್ಲಿ ಕೆಲಸ ಮಾಡಿ ಮನೆ ಬಾಡಿಗೆ ಕಟ್ಟಿ ಮತ್ತು ಕುಟುಂಬವನ್ನು ನಡೆಸಲು ಸಾಧ್ಯವಾಗ್ತಿಲ್ಲ.
ಅಷ್ಟೇ ಅಲ್ಲ, ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಕೂಡಾ ಕಷ್ಟವಾಗುತ್ತಿದೆ. ಅಲ್ಲದೇ, ಇಲ್ಲಿ ಒಬ್ಬನ ಮಗ ಅಂಗವೈಕಲ್ಯಕ್ಕೆ ತುತ್ತಾಗಿದ್ದಾನೆ. ಅವರಿಗೆ ಚಿಕಿತ್ಸೆ ಕೊಡಿಸಲು ಆಗ್ತಿಲ್ಲ. ಈ ಬಗ್ಗೆ ರಾಜಕಾರಣಿಗಳಿಗೆ ಮತ್ತು ಬಿಬಿಎಂಪಿಯವರಿಗೆ ಎಷ್ಟೋ ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ. ನಿಮ್ಮ ಸೇವಾ ಮನೋಭಾವ ನೋಡಿ ನೋಡಿದ್ದೇನೆ. ಹೀಗಾಗಿ ನಿಮ್ಮಿಂದ ಏನಾದ್ರೂ ಸಹಾಯವಾಗಬಹುದು ಎಂಬ ನಿರೀಕ್ಷೆಯಿಂದ ಈ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಕೈಲಾದ ಸಹಾಯ ಮಾಡಿ” ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಆಂಥೋನಿ ಸ್ವಾಮಿಯವರಿಗೆ ಬಿಬಿಎಂಪಿ ನಿಗದಿಪಡಿಸಿದ 1 ಸಾವಿರ ವೇತನವನ್ನು ಹಲವು ವರ್ಷಗಳಿಂದ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ದರ್ಶನ್ ಸಹಾಯ ಮಾಡುತ್ತಾರೆ ಎಂಬ ನಂಬಿಕೆಯಿಂದ ತಮ್ಮ ಮಗಳ ಕೈಯಲ್ಲಿ ಪತ್ರ ಬರೆಸಿ, ಕಳೆದ ಭಾನುವಾರು ಅವರ ಮನೆಗೆ ಹೋಗಿ ಪತ್ರ ನೀಡಿದ್ದಾರೆ ಎನ್ನಲಾಗಿದೆ. ಮುಂದಿನ ಸಂಗತಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ!

LEAVE A REPLY

Please enter your comment!
Please enter your name here