ಸೂರ್ಯನ ಕಿರಣಗಳಿಂದ ನಮ್ಮ ದೇಹದ ಬಣ್ಣ ಕಪ್ಪಾಗಿರುತ್ತದೆ. ಇದನ್ನ ಹೋಗಲಾಡಿಸಲು ನಾವು ಬಹಳ ಹಣವನ್ನ ಖರ್ಚು ಮಾಡುತ್ತೇವೆ ಆದರೆ ಮೊದಲಿನ ಬಣ್ಣ ಮಾತ್ರ ಬರುವುದಿಲ್ಲ, ಇಂತಹ ಸೂರ್ಯನ ಕಿರಣಗಳಿಂದಾಗಿರುವ ಕಪ್ಪು ಕಲೆಯನ್ನ ತೆಗೆಯಲು ಮನೆಯಲ್ಲಿಯೇ ಇದೆ ಸುಲಭ ಮದ್ದು.

ನಾವು ಹೊರಗೆ ತಿರುಗಾಡಿದರೆ ಮಾತ್ರವಲ್ಲ ನಾವು ಮನೆಯಲ್ಲಿಯೇ ಇದ್ದರು ಸಹ ನಮ್ಮ ದೇಹದ ಕೆಲವು ಭಾಗಗಳು ಕಪ್ಪಗಿರುತ್ತವೆ. ಈ ಕಪ್ಪು ಕಲೆಯನ್ನ ಹೋಗಿಸಲು ಹೆಚ್ಚು ಹಣ ಖರ್ಚು ಮಾಡುವುದು ಬೇಡ, ದೇಹದ ಮೇಲಿನ ಕಪ್ಪು ಭಾಗಗಳಿಂದ ಮುಕ್ತಿ ಹೊಂದಲು ಇಲ್ಲಿದೆ ನೋಡಿ ಸುಲಭ ಮದ್ದು. ಇಲ್ಲಿ ನಾವು ತಿಳಿಸಿರುವ ಟಿಪ್ಸ್ ಗಳಲ್ಲಿ ನಿಮಗೆ ಅನುಕೂಲವಾಗುವ ಯಾವುದಾದರು ಒಂದನ್ನ ಬಳಕೆ ಮಾಡಿ.

* 1 ಚಮಚ ಕಡಲೆ ಹಿಟ್ಟಿಗೆ ಸ್ವಲ್ಪ ಹಾಲಿನ ಕೆನೆ ಹಾಗೂ ಚಿಟಿಕೆ ಅರಿಶಿಣವನ್ನ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ, ತಯಾರಾದ ಈ ಪೇಸ್ಟ್ ಅನ್ನು ದೇಹದ ಕಪ್ಪಗಿರು ಭಾಗಗಳಿಗೆ ಹಚ್ಚಿ 5 ರಿಂದ 10 ನಿಮಿಷ ಮಸಾಜ್ ಮಾಡಿ ತಣ್ಣೀರಿನಿಂದ ತೊಳೆಯಿರಿ, ಹೀಗೆ ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಮಾಡುತ್ತ ಬಂದರೆ ನಿಮ್ಮ ದೇಹದ ಮೇಲಿನ ಕಪ್ಪು ಭಾಗ ಕಡಿಮೆಯಾಗುತ್ತದೆ.

* 2 ಚಮಚ ಸಾಸಿವೆ ಎಣ್ಣೆಗೆ, ಸ್ವಲ್ಪ ಅರಿಶಿನದ ಪುಡಿಯನ್ನ ಹಾಕಿ ಕಲಸಿ, ಅದನ್ನ ಸ್ನಾನ ಮಾಡುವ ಮುನ್ನ ಕಪ್ಪಾಗಿರುವ ದೇಹದ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ ಕಪ್ಪಗಿರು ನಿಮ್ಮ ದೇಹದ ಭಾಗ ಕ್ರಮೇಣ ಕಡಿಮೆಯಾಗುತ್ತದೆ. ಇದನ್ನ ವಾರಕ್ಕೆ ಎರಡು ಬಾರಿ ಮಾಡಿ.

* ಒಂದು ಚಮಚ ಅಕ್ಕಿ ಹಿಟ್ಟಿಗೆ ಸ್ವಲ್ಪ ಹಾಲು ಹಾಕಿ ಕಲಸಿ ಪೇಸ್ಟ್ ತಯಾರಿಸಿ ಅದನ್ನ ಕಪ್ಪಗಿರುವ ದೇಹದ ಭಾಗಕ್ಕೆ ಹಚ್ಚಿ ಚನ್ನಾಗಿ ಮಸಾಜ್ ಮಾಡಿ 10 ನಿಮಿಷಗಳ ಬಳಿಕ ತೊಳೆಯಿರಿ ಇದರಿಂದ ಕಪ್ಪಗಿರುವ ದೇಹದ ಭಾಗವೆಲ್ಲ ಬೆಳ್ಳಗಾಗುತ್ತದೆ. ಇದನ್ನ ಪ್ರತಿ ದಿನವೂ ಸಹ ಮಾಡಬಹುದು.

LEAVE A REPLY

Please enter your comment!
Please enter your name here