ಮಹಿಳೆಯರು ತಾವು ಎಲ್ಲರಿಗಿಂತ ಚನ್ನಾಗಿ ಕಾಣಬೇಕು ಎಂದು ಪ್ರತಿ ಬಾರಿಯೂ ಹಂಬಲಿಸುತ್ತಾರೆ. ಇದಕ್ಕಾಗಿ ಸಾಕಷ್ಟು ಸರ್ಕಸ್ ಗಳನ್ನೂ ಮಾಡುತ್ತಾರೆ. ನಮ್ಮಲ್ಲಿ ಹೆಚ್ಚಿನ ಮಹಿಳೆಯರ ಮುಖ ಅಂದವಾಗಿದ್ದರು ಸೂರ್ಯನ ಬಿಸಿಲು, ಧೂಳು ಹಾಗು ಪ್ರಧೂಷಣೆಯಿಂದಾಗಿ ಕೈಗಳು ತಮ್ಮ ಅಂದವನ್ನ ಕಳೆದುಕೊಂಡು ಕಪ್ಪಗಿರುತ್ತವೆ. ಮುಖದಷ್ಟೇ ಪ್ರಾಮುಕ್ಯತೆಯನ್ನ ಹೊಂದಿರುವ ಕೈಗಳ ಅಂದವನ್ನ ಹೆಚ್ಚಿಸಲು ಹೆಚ್ಚಿನವರು ತಲೆಕೆಡಿಸಿಕೊಳ್ಳುತ್ತಾರೆ ಅಂತವರಿಗೆಲ್ಲ ಇಲ್ಲಿದೆ ನೋಡಿ ಸುಲಭ ಹಾಗು ಸರಳ ಮನೆ ಮದ್ದು, ನಾವಿಂದು ನಿಮಗೆ ತಿಳಿಸುತ್ತಿರುವ ವಿಧಾನದಲ್ಲಿ ಎಲವೂ ಮನೆಯಲ್ಲಿ ಸುಲಭವಾಗಿ ಸಿಗುವಂತಹ ಪದಾರ್ತಗಳೇ ಆಗಿವೆ.

ನಾವು ಮೊದಲಿಗೆ ಕಾಫಿ ಡಿಕಾಸಿಷನ್ ಮಾಡಿ ಉಳಿದಿರುವ ಕಾಫಿ ಪುಡಿಯನ್ನ ತೆಗೆದುಕೊಳ್ಳ ಬೇಕು, ನೆನಪಿರಲಿ ಇದನ್ನ ನಾವು ಕಾಫಿ ಮಡಿದ ಅರ್ಧಗಂಟೆವಳಗೆ ಮಾತ್ರ ಬಳಸುವುದು ಉತ್ತಮ. ಈ ಕಾಫಿ ಪೌಡರ್ ಗೆ ಒಂದು ಚಮಚ ಕೋಕೋ ಪೌಡರ್ ಹಾಗು ಒಂದು ಚಿಟಿಕೆ ಉಪ್ಪು, ಇವನ್ನೆಲ್ಲ ಹಾಕಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನ ನಾವು ಬಳಸಿದ ಮೊದಲನೇ ಬಾರಿಗೆ ನಾವು ಬಹಳಷ್ಟು ಬದಲಾವಣೆಯನ್ನ ಕಾಣಬಹುದು.

ನಾವು ತಯಾರಿಸಿಟ್ಟುಕೊಂಡಿರುವ ಮಿಶ್ರಣವನ್ನ ಚನ್ನಾಗಿ ತೂಳೆದಿರುವ ಕೈಗಳಿಗೆ ಹಚ್ಚಿ ಚನ್ನಾಗಿ ಮಸಾಜ್ ಮಾಡಬೇಕು, ಇದನ್ನ ನಮ್ಮ ದೇಹದ ಕಪ್ಪಾದ ಭಾಗಗಳಾದ ಕೈ ಕಾಲುಗಳಿಗೆ ಹಾಗು ಮುಖಕ್ಕೆ ಸಹಿತ ಬಳಸ ಬಹುದು. ಇದರಿಂದ ಡೆಡ್ ಸ್ಕಿನ್ ನಿವಾರಣೆ ಆಗುವುದರ ಜೊತೆಗೆ ಸನ್ ಟಾನ್ ಕಡಿಮೆಯಾಗುತ್ತದೆ, ಇದನ್ನ ನಾವು ವಾರಕ್ಕೆ ಎರಡು ಬಾರಿಯಾದರೂ ಬಳಸ ಬೇಕು. ೫ ನಿಮಿಷಗಳ ಕಾಲ ಮಸಾಜ್ ಮಾಡಿ ತಕ್ಷಣ ತೊಳೆದುಕೊಳ ಬಹುದು, ಅಥವಾ ೫ ಮಿನಿಷಗಳ ಕಾಲ ಬಿಟ್ಟು ಸಹ ತಣ್ಣೀರಿನಿಂದ ತೊಳೆದುಕೊಳ್ಳ ಬಹುದು.

LEAVE A REPLY

Please enter your comment!
Please enter your name here