ಬೆಲ್ಲ ತುಂಬಾ ಸಿಹಿಯಾಗಿದ್ದು, ಇದನ್ನು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಬೆಲ್ಲದಲ್ಲಿ ಐರನ್ ,ಕ್ಯಾಲ್ಸಿಯಂ ,ಪೊಟ್ಯಾಶಿಯಂ ಸಮೃದ್ಧಿಯಾಗಿದೆ. ಇದು ಆರೋಗ್ಯಕ್ಕ ತುಂಬಾ ಉತ್ತಮ. ಇದನ್ನು ಮನೆಮದ್ದುಗಳಲ್ಲಿ ಬಳಸುತ್ತಾರೆ. 

ಪ್ರತಿದಿನ ಊಟದ ನಂತರ ಒಂದು ಚಿಕ್ಕ ಬೆಲ್ಲದ ತುಂಡನ್ನು ತಿಂದರೆ ಅದ್ಭುತವಾದ ಪ್ರಯೋಜನವನ್ನು ಪಡೆಯಬಹುದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗಿ ಶೀತ ,ಕೆಮ್ಮು ಅಂತಹ ಇನ್ಫೆಕ್ಷನ್ ಅನ್ನು ಬಾರದಂತೆ ನೋಡಿಕೊಳ್ಳುತ್ತದೆ. ಪ್ರತಿದಿನ ಒಂದು ಚಿಕ್ಕ ಬೆಲ್ಲದ ತುಂಡನ್ನು ತಿನ್ನುವುದರಿಂದ ಲಿವರ್ನಲ್ಲಿರುವ ಮಲಿನಗಳನ್ನು ಹೊರ ಹಾಕಿ ,ಅದರ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ . ಊಟದ ನಂತರ ಒಂದು ಚಿಕ್ಕ ಬೆಲ್ಲದ ತುಂಡನ್ನು ತೆಗೆದುಕೊಳ್ಳುವುದರಿಂದ ನಾವು ತಿಂದ ಆಹಾರ ಜೀರ್ಣವಾಗಿ ಮಲಬದ್ಧತೆಯಂತಹ ಸಮಸ್ಯೆನ್ನು ದೂರ ಮಾಡುತ್ತದೆ .

ಒಂದು ಗ್ಲಾಸ್ ಬೆಲ್ಲದ ಪಾನಕದಲ್ಲಿ ಎರಡು ತುಳಸಿ ಎಲೆಗಳನ್ನು ಹಾಕಿ ಕುಡಿಯುವುದರಿಂದ ಒಣ ಕೆಮ್ಮಿನಿಂದ ಉಪಶಮನ ಪಡೆಯಬಹುವುದು .ಬೆಲ್ಲವನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳುವುದರಿಂದ ರಕ್ತ ಹೀನತೆ ಸಮಸ್ಯೆಯನ್ನು ದೂರ ಮಾಡುತ್ತದೆ ರಕ್ತದ ಹರಿತವನ್ನು ಉತ್ತಮಗೊಳಿಸುತ್ತದೆ . ಇದು ಹೀಮಗ್ಲೋಬಿನ್ ಅಂಶವನ್ನು ಹೆಚ್ಚು ಮಾಡಿ ,ಹೃದಯಕ್ಕೆ ಸಂಬಂದಿಸಿದ ಸಮಸ್ಯೆಯನ್ನು ದೊರವಿಡುತ್ತದೆ.

 

LEAVE A REPLY

Please enter your comment!
Please enter your name here