ದೇಹದಲ್ಲಿ ಶೇಖರವಾಗಿರುವ ಕೊಬ್ಬಿನಲ್ಲಿ ಸೊಂಟದ ಕೊಬ್ಬು ಕರಗಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಭಾಗದಲ್ಲಿ ಕೊಬ್ಬು ಬೇಗನೆ ಶೇಖರವಾಗಿ ದೇಹದ ಶೇಪ್ ಹಾಳಾಗುತ್ತದೆ.ಆದರೆ ಈ ಭಾಗದ ಕೊಬ್ಬು ಒಂದಿಂಚು ಕಗರಬೇಕೆಂದರೆ ಸಾಕಷ್ಡು ಪರಿಶ್ರಮ ಅಗತ್ಯ.

ಸೊಂಟದ ಸುತ್ತಳತೆ ಕಡಿಮೆ ಮಾಡಲು ವ್ಯಾಯಮದ ಜತೆ ಈ ಆಹಾರಗಳನ್ನು ತಿನ್ನಿ:

ಆ್ಯಪಲ್‌ ಸಿಡರ್‌ ವಿನೆಗರ್‌: ಬಿಸಿ ನೀರಿಗೆ 1-2 ಚಮಚ ಆ್ಯಪಲ್‌ ಸಿಡರ್‌ ವಿನೆಗರ್‌ ಹಾಕಿ, ಆ ನೀರನ್ನು ಕುಡಿಯುವುದರಿಂದ ಹಸಿವು ಕಮ್ಮಿಯಾಗುವುದು. ಅಲ್ಲದೆ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಕೂಡ ಸಹಕಾರಿ. ದಿನದಲ್ಲಿ ಒಂದು ಲೋಟ ಆ್ಯಪಲ್‌ ಸಿಡರ್‌ ವಿನೆಗರ್‌ ನೀರು ಕುಡಿದರೆ ಸಾಕು.

ಬೆಳ್ಳುಳ್ಳಿ: ದಿನ ಎರಡು ಎಸಳು ಹಸಿ ಬೆಳ್ಳುಳ್ಳಿ ತಿಂದರೆ ದೇಹದಲ್ಲಿರುವ ಅಧಿಕ ಕೊಬ್ಬು ಕರಗುವುದು.

ನಿಂಬೆ ರಸ: ಬಿಸಿ ನೀರಿಗೆ ನಿಂಬೆ ರಸ ಹಾಗೂ ಜೇನು ಹಾಕಿದರೆ ಸೊಂಟದ ಸುತ್ತಳತೆ ಕಡಿಮೆಯಾಗುವುದು.

ಚಕ್ಕೆ: ಬಿಸಿ ನೀರಿಗೆ ಅರ್ಧ ಚಮಚ ಚಕ್ಕೆ ಪುಡಿ ಹಾಕಿ ಸ್ವಲ್ಪ ಜೇನು ಹಾಕಿ ಮಿಕ್ಸ್‌ ಮಾಡಿ ಕುಡಿಯುವುದರಿಂದ ಮೈ ಕೊಬ್ಬು ಕರಗುವುದು.

ಗ್ರೀನ್‌ ಟೀ: ವ್ಯಾಯಾಮದ ಬಳಿಕ ಒಂದು ಲೋಟ ಗ್ರೀನ್‌ ಟೀ ಕುಡಿಯುವುದರಿಂದ ಮೈ ಕೊಬ್ಬು ಬೇಗನೆ ಕರಗುವುದು.

ಕ್ಯಾಬೇಜ್‌: ಸೊಂಟದ ಕೊಬ್ಬು ಕರಗಿಸಲು ಕ್ಯಾಬೇಜ್‌ ಸಲಾಡ್ ತಿನ್ನಿ.

LEAVE A REPLY

Please enter your comment!
Please enter your name here