ನಮ್ಮ ಭಾರತ ನಾರಿಯರ ಅಂದ ಹೆಚ್ಚಿಸುವುದು ಸೀರೆಗಳು. ನಾರಿಯರು ಸೀರೆ ಉಟ್ಟರೆ ಬಹಳಷ್ಟು ಅಂದವಾಗಿ ಕಾಣುತ್ತಾರೆ. ಸೀರೆಯಲ್ಲಿ ಅವರನ್ನ ನೋಡುವುದೇ ಒಂದು ರೀತಿಯ ಮಜಾ. ಸೀರೆಯನ್ನು ಹಲವರು ಉಡಲು ಇಷ್ಟ ಪಡುತ್ತಾರೆ. ವಿಶೇಷ ಸಮಾರಂಭಗಳಲ್ಲಿ. ವಿಶೇಷ ಸಂದರ್ಭಗಳಲ್ಲಿ ಸೀರೆಗಳನ್ನ ಹೆಚ್ಚು ಮಹಿಳೆಯರು ಉಡುತ್ತಾರೆ. ಇದರಿಂದ ಅವರ ಅಂದ ಇನ್ನಷ್ಟು ಇಮ್ಮಡಿಗೊಳ್ಳುತ್ತದೆ. ಎಲ್ಲರು ಕೇವಲ ಚಂದದ ಸೀರೆ ಉಡುತ್ತಾರೆ. ಆದರೆ ಸೀರೆಯ ಅಸಲಿ ಅಂದ ಇರೋದು ಕೇವಲ ಸೀರೆಯಲ್ಲಿ ಮಾತ್ರವಲ್ಲ. ಅದಕ್ಕೆ ಸರಿ ಹೊಂದುವ ಬ್ಲೌಸ್, ಲಂಗ, ಆಭರಣ, ಚಪ್ಪಲಿ ಎಲ್ಲವೂ ಮಹತ್ವ ಪಡೆಯುತ್ತದೆ. ಅಂದ ಹೆಚ್ಚಿಸಲು ಲಾರಿಗಳಷ್ಟು ಆಭರಣಗಳನ್ನ ತೊಡುವುದು ಸರಿಯಲ್ಲ. ಸೀರೆ ಉಡುವುದರ ಕೆಲವು ಟಿಪ್ಸ್ ಇಲ್ಲಿವೆ ನೋಡಿ.

* ಬೇರೆ ಬೇರೆ ಸ್ಟೈಲ್ ನಲ್ಲಿ ಸೀರೆಯನ್ನು ಉಡಬಹುದು. ಆದ್ರೆ ಅದ್ರಲ್ಲಿ ಯಾವ ಶೈಲಿ ನಿಮ್ಮನ್ನು ಆಕರ್ಷಕವಾಗಿ ಮಾಡುತ್ತದೆಯೋ ಅದೇ ಶೈಲಿನಲ್ಲಿ ಸೀರೆ ಉಟ್ಟುಕೊಳ್ಳಿ. ಸೊಂಟಕ್ಕಿಂತ ತುಂಬಾ ಮೇಲೆ ಅಥವಾ ತುಂಬಾ ಕೆಳಗೆ ಇರೋದು ಬೇಡ. ತೆಳ್ಳಗೆ- ಬೆಳ್ಳಗೆ ಇರೋರು ಹೊಕ್ಕಳ ಕೆಳಗೆ ಸೀರೆ ಉಟ್ಟರೆ ಒಳ್ಳೆಯದು. ಹಾಗಂತ ದಪ್ಪಗಿರುವವರು ಹೀಗೆ ಮಾಡಿದ್ರೆ ಹೊಟ್ಟೆ ಮತ್ತಷ್ಟು ದೊಡ್ಡದಾಗಿ ಕಾಣುತ್ತದೆ.

* ಸೀರೆ ಒಳಗೆ ಹಾಕುವ ಒಳ ಲಂಗ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ಸೀರೆ ಬಣ್ಣದ ಒಳ ಲಂಗವನ್ನು ಧರಿಸಬೇಕು. ಬೇರೆ ಬಣ್ಣದ ಲಂಗ ಧರಿಸಿದ್ರೆ ಮುಜುಗರಕ್ಕೊಳಗಾಗುವ ಪರಿಸ್ಥಿತಿ ಎದುರಾಗಬಹುದು.

* ಬ್ರಾ ಬಗ್ಗೆ ಗಮನವಿರಬೇಕು. ಬ್ಲೌಸ್ ನಿಂದ ಹೊರಗೆ ಬರುವ ಬ್ರಾ ಅಸಹ್ಯವೆನಿಸುತ್ತದೆ. ಬ್ಲೌಸ್ ನಲ್ಲಿರುವ ಸೇಫ್ಟಿ ಹೋಲ್ಡರ್ ಜೊತೆ ಬ್ರಾವನ್ನು ಲಾಕ್ ಮಾಡಿ. ಇಲ್ಲವಾದ್ರೆ ಪಿನ್ ಸಹಾಯದಿಂದಲೂ ಬ್ರಾ ಹೊರಗೆ ಬರದಂತೆ ನೋಡಿಕೊಳ್ಳಿ.

* ಕೆಲ ಮಹಿಳೆಯರು ಸೀರೆ ಜೊತೆ ಹಳೆಯ ಅಥವಾ ದೊಡ್ಡ ಹ್ಯಾಂಡ್ ಬ್ಯಾಗ್ ಹಿಡಿದು ಬರ್ತಾರೆ. ಹಾಗಾಗಿ ಸ್ಕೂಲ್ ಟೀಚರ್ ನಂತೆ ಕಾಣ್ತಾರೆ. ಪಾರ್ಟಿ ಅಥವಾ ಸಮಾರಂಭಗಳಿಗೆ ಹೋಗುವಾಗ ಸೀರೆ ಜೊತೆ ಚಿಕ್ಕದಾದ ಬ್ಯಾಗ್ ಅಥವಾ ಸಣ್ಣ ಪರ್ಸ್ ತೆಗೆದುಕೊಂಡು ಹೋಗಿ.

* ಸೀರೆ ಪಾದಕ್ಕಿಂತ ಕೆಳಗೆ ಬರೋದ್ರಿಂದ ಚಪ್ಪಲಿ ಕಾಣೋದಿಲ್ಲ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಹಳೆಯ ಚಪ್ಪಲಿ ಧರಿಸುವುದುಂಟು. ಸೀರೆ ಉಟ್ಟ ಮೇಲೆ ಸರಾಗವಾಗಿ, ಆರಾಮಾಗಿ ಓಡಾಡಲು ಬರಬೇಕು. ಹಾಗಾಗಿ ನಿಮಗೆ ಯಾವುದೇ ಕಿರಿಕಿರಿ ಎನಿಸದ, ಸೀರೆಗೆ ಸರಿ ಹೊಂದುವ ಚಪ್ಪಲಿ ಧರಿಸಿ.

LEAVE A REPLY

Please enter your comment!
Please enter your name here